Skip to content | Skip to navigation | Skip to search

ಸಂಚರಣೆ

ಗ್ನೂ ಆಪರೇಟಿಂಗ್ ಸಿಸ್ಟಂ - ಫ್ರೀ ಆಸ್ ಇನ್ ಫ್ರೀಡಂ

ಏನದು ಗ್ನೂ ಯೊಜನೆ?

ಗ್ನೂ ಯೊಜನೆಯನ್ನು ೧೯೮೪ ರಲ್ಲಿ ಯುನಿಕ್ಸ್ ಮಾದರಿಯ ಗಣಕಯಂತ್ರ ತಂತ್ರಾಂಶವನ್ನು ಅಭಿವ್ುದ್ದಿ ಗೊಳಿಸಲು ಪ್ರಾರಂಬಿಸಲಾಯಿತು, ಅದೇ ಸ್ವತಂತ್ರ ತಂತ್ರಾಂಶ: ಗ್ನೂ ಸಿಸ್ಟಂ. ಲಿನಕ್ಸ್ ಕರ್ನೆಲ್ (kernel) ಉಪಯೊಗಿಸುತ್ತಿರುವ ವಿವಿದ ಗ್ನೂ ಆಪರೇಟಿಂಗ್ ಸಿಸ್ಟಂಗಳು ಇಂದು ಎಲ್ಲೆಡೆ ಉಪಯೊಗಿಸಲ್ಪಡುತ್ತಿವೆ; ಇವನ್ನು "ಲಿನಕ್ಸ್" ಎಂದು ಕರೆದರೂ ಅವನ್ನುಗ್ನೂ/ಲಿನಕ್ಸ್ ಸಿಸ್ಟಂ ಎಂದು ಕರೆಯುವುದೇ ಹೆಚ್ಚಾಗಿ ಚಾಲ್ತಿಯಲ್ಲಿದೆ.

ಗ್ನೂ “ಗ್ನೂ ಯುನಿಕ್ಸ್ ಅಲ್ಲ! (GNU's Not Unix)” ಎಂಬುದರ ಸಂಷ್ಶಿಪ್ತ ರೂಪವಾಗಿದೆ; ಇದನ್ನು ಗುಹ್-ನೂ (guh-noo) ಎಂದು ಉಚ್ಚರಿಸಲಾಗುತ್ತದೆ, canoe ಎಂದೂ ಕರೆಯಲ್ಪಡುತ್ತದೆ.

ಏನಿದು ಸ್ವತಂತ್ರ ತಂತ್ರಾಂಶ?

"ಸ್ವತಂತ್ರ ತಂತ್ರಾಂಶ” ಸ್ವಾತಂತ್ರ್ಯತೆಯ ಅಂಶ, ಬೆಲೆಯಲ್ಲ. ಇದನ್ನ ಅರಿಯಲು ನೀವು "ಸ್ವತಂತ್ರ ಸಂವಾದ" ದಲ್ಲಿನ "ಸ್ವತಂತ್ರ" ಎಂದು ಅರ್ಥೈಸಿಕೊಳ್ಳ ಬೇಕು, "ಉಚಿತ ಬಿಯರ್" ನಲ್ಲಿನ "ಉಚಿತ"ವನ್ನಲ್ಲ. .

ಸ್ವತಂತ್ರ ತಂತ್ರಾಂಶ ಬಳಕೆದಾರರ ಬಳಕೆ, ಅನುಕರಣೆ ಮತ್ತು ವಿತರಣೆ, ಅಧ್ಯಯನ, ಬದಲಿಸುವಿಕೆ ಮತ್ತು ಅಭಿವ್ರುದ್ದಿಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಅಂಶವಾಗಿದೆ. ವಿಸ್ತರಿಸಿ ಹೇಳುವುದಾದರೆ, ಇದು ನಾಲ್ಕು ರೀತಿಯ ಸ್ವಾತಂತ್ರ್ಯವನ್ನು ತಂತ್ರಾಂಶ ಬಳಕೆದಾರರಿಗೆ ಸೂಚಿಸುತ್ತದೆ :

  • ಪ್ರೊಗ್ರಾಮನ್ನು ಯಾವುದೇ ಉದ್ದೇಶಕ್ಕೆ ಬಳಸುವ ಸ್ವಾತಂತ್ರ್ಯ (ಸ್ವಾತಂತ್ರ್ಯ ೦).
  • ಪ್ರೊಗ್ರಾಮ್ ಹೇಗೆ ಕಾರ್ಯವಹಿಸುತ್ತದೆ ಮತ್ತು ಅದನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ ಹೇಗೆ ಅಳವಡಿಸಿಕೊಳ್ಳುವುದು ಎಂಬುದನ್ನು ಅಧ್ಯಯನ ಮಾಡುವ ಸ್ವ್ಯಾತಂತ್ರ್ಯ (ಸ್ವಾತಂತ್ರ್ಯ ೧). ಮೂಲ ಗ್ರಂಥ/ರೂಪ ನೋಡಲು (source code) ಮಾಡಿಕೊಡುವ ಪೂರ್ವ ಕರಾರು ಇದಕ್ಕೆ ಅನ್ವಯಿಸುತ್ತದೆ.
  • ಪ್ರತಿಗಳನ್ನು ಮರುವಿತರಣೆ ಮಾಡುವ ಸ್ವಾತಂತ್ರ್ಯ, ಇದರಿಂದ ನಿಮ್ಮ ನೆರೆಹೊರೆಯವರಿಗೆ ನೆರವಾಗಲು ಸಾದ್ಯವಾಗುತ್ತದೆ (ಸ್ವಾತಂತ್ರ್ಯ ೨).
  • ತಂತ್ರಾಂಶಗಳನ್ನ ಅಬಿವ್ರುದ್ದಿ ಮಾಡುವ, ಮತ್ತು ಪರಿಷ್ಕರಿಸಿದ ಆವ್ರುತ್ತಿಗಳನ್ನು ಸಮುದಾಯದ ಒಳಿತಿಗಾಗಿ ಸಾರ್ವಜನಿಕರಿಗೆ ಬಿಡುಗಡೆಗೊಳಿಸುವ ಸ್ವಾತಂತ್ರ್ಯ. (ಸ್ವಾತಂತ್ರ್ಯ ೩). ಮೂಲ ಗ್ರಂಥ/ರೂಪ ನೊಡಲು (source code) ಮಾಡಿಕೊಡುವ ಪೂರ್ವ ಕರಾರು ಇದಕ್ಕೆ ಅನ್ವಯಿಸುತ್ತದೆ.

ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ ಅಂದರೇನು?

ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ (ಎಫ್ ಎಸ್ ಎಫ್) ಗ್ನೂ ಯೊಜನೆಯ ಮೂಲ ವ್ಯವಸ್ಥೆಯ ಹೊಣೆಗಾರನಾಗಿದೆ. ಎಫ್ ಎಸ್ ಎಫ್ ಸಂಘ ಸಂಸ್ಥೆಗಳಿಂದ ಅಷ್ಟೇನೂ ದೇಣಿಗೆಯನ್ನು ಪಡೆಯುವುದಿಲ್ಲ, ಆದರೆ ನಿಮ್ಮಂತಹವರ ವೈಯುಕ್ತಿಕ ಸಹಾಯವನ್ನು ಬೆಂಬಲವಾಗಿಟ್ಟುಕೊಂಡಿದೆ.

ದಯವಿಟ್ಟು ಎಫ್ ಎಸ್ ಎಫ್ ಅಸೋಸಿಯೇಟ್ ಸದಸ್ಯತ್ವ ಪಡೆದೂ, ಕೈಪಿಡಿಗಳನ್ನು ಕೊಳ್ಳುವುದರಿಂದಲೂ ಅಥವಾ ದೇಣಿಗೆಯನ್ನ ನೀಡುವ ಮೂಲಕ ನಿಮ್ಮ ಸಹಾಯ ಹಸ್ತ ಚಾಚಿ. ನೀವು ನಿಮ್ಮ ಉದ್ಯಮದಲ್ಲಿ ಸ್ವತಂತ್ರ ತಂತ್ರಜ್ನ್ಯಾನವನ್ನ ಬಳಸುತ್ತಿದ್ದಲ್ಲಿ, ಕಾರ್ಪೊರೇಟ್ ಪ್ರಾಯೊಜಕತ್ವ ಅಥವಾ ಗ್ನೂ ತಂತ್ರಾಂಶದ ಡಿಲಕ್ಸ್ ಹಂಚಿಕೆಯನ್ನು ಎಪ್ ಎಸ್ ಎಪ್ ಅನ್ನು ಸಂರಕ್ಷಣೆ ಮಾಡಲು ಪಡೆಯಬಹುದಾಗಿದೆ.

ಗ್ನೂ ಯೊಜನೆ ಎಫ್ ಎಸ್ ಎಫ್ ನ ಕಾರ್ಯಚಟುವಟಿಕೆಗಳನ್ನುಸಂರಕ್ಷಿಸುವುದು ಆಪರೇಟಿಂಗ್ ಸಿಸ್ಟಂನ ಉಪಯೊಗ, ಅದ್ಯಯನ, ಅನುಕರಣೆ, ಬದಲಾವಣೆ, ಮತ್ತು ಮರು ವಿತರಣೆಯ ಸ್ವಾತಂತ್ರ್ಯವನ್ನು ಉಳಿಸಿ, ಸಂರಕ್ಷಿಸಿ, ಪ್ರಸಿದ್ದಿಗೊಳಿಸುವುದರೊಂದಿಗೆ ಸ್ವತಂತ್ರ ತಂತ್ರಾಂಶದ ಬಳಕೆದಾರರ ಹಕ್ಕುಗಳಿಗಾಗಿ ಹೊರಾಡುತ್ತದೆ. ನಾವು ಅಂತರ್ಜ್ಯಾಲದಲ್ಲಿ ಸಂವಾದ, ಮುದ್ರಣ, ಮತ್ತು ಸಂಘಟನೆಯ ಸ್ವಾತಂತ್ರ್ಯಗಳನ್ನೂ, ಖಾಸಗಿ ಸಂದೇಶಗಳಿಗೆ ಎನ್ಕ್ರಿಪ್ಷನ್ ತಂತ್ರಾಂಶ ಬಳಕೆಯನ್ನು, ಮತ್ತು ಖಾಸಗಿ ಅದಿಪತ್ಯಗಳಿಂದ ತುಳಿತಕ್ಕೆ ಒಳಗಾಗದಂತಹ ತಂತ್ರಜ್ಯ್ನಾನಗಳನ್ನು ಬರೆಯುವ ಹಕ್ಕನ್ನು ಬೆಂಬಲಿಸುತ್ತೇವೆ. ನಿಮಗೆ ಈ ಸಮಸ್ಯೆಗಳ ಬಗ್ಗೆ ಮತ್ತಷ್ಟು ತಿಳಿದು ಕೊಳ್ಳುವಲ್ಲಿ ಈ ಹೊತ್ತಿಗೆ ಸಹಾಯ ಮಾಡಲಿದೆ ಸ್ವತಂತ್ರ ತಂತ್ರಾಂಶ, ಸ್ವತಂತ್ರ ಸಮಾಜ.

ಹೆಚ್ಚಿನ ಮಾಹಿತಿ


ಗ್ನೂನ ಮಿಂಚುಗಳು

The FSF has released the GNU General Public License, version 3 and the Lesser GNU General Public License, version 3!

Massachusetts residents can show their support for free software in government by voting on Governor Patrick's website.

ಇತರೆ ಸುದ್ದಿಗಳಿಗೆ ಮತ್ತು ಗ್ನೂ ಮಿಂಚುಗಳ ವಿಭಾಗದಲ್ಲಿ ಕಂಡುಬರುವ ಹನಿಗಳಿಗೆ, ನೊಡಿ ಹೊಸದೇನಿದೆ ಗ್ನೂ ಯೊಜನೆಯಲ್ಲಿ ಮತ್ತು ಏನಿದು?.

ಕ್ರಮ ಕೈಗೊಳ್ಳಿ

ಇತರೆ ಕ್ರಮ ಕೈಗೊಳ್ಳ ಬೇಕಾದವುಗಳು

 

GPLv3

ಈ ಪುಟದ ಅನುವಾದಗಳು